Monday, 27 September 2021
ಜೀವರಸ ಶುದ್ಧಿಯೇ ಆರೋಗ್ಯ
🌷 ಅಮೃತಾತ್ಮರೇ, ನಮಸ್ಕಾರ"* 🌷
🦢 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ** 🦢
🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🍀
•••••••••••••••••••••••••••••••••••••••
ದಿನಾಂಕ: 27.08.2021
ಸ್ವಸ್ಥ ಜೀವನಕ್ಕೆ ಆಯುರ್ವೇದ, ಸಂಚಿಕೆ-69
•••••••••••••••••••••••••••••••••••••••
✍️: ಇಂದಿನ ವಿಷಯ:
ಜೀವರಸ ಶುದ್ಧಿಯೇ ಆರೋಗ್ಯ 💦
•••••••••••••••••••••••••••••••••••••••
ಮಾನವನ ಜೀವಕೋಶಗಳು ಆಹಾರವನ್ನು ಸ್ವೀಕರಿಸುವುದು ದ್ರವರೂಪದ ಮಾಧ್ಯಮದಿಂದ ಮಾತ್ರ. ಇಂತಹ ಜೀವ ದ್ರವವನ್ನು ಹುಳಿ ಬರಿಸಿಕೊಂಡು ಜೀವಕೋಶಗಳನ್ನು ರಕ್ಷಿಸುವುದು ಅಸಾಧ್ಯ...
•|•|•|•|•|•
ನಾವು ಸೇವಿಸಿದ ಆಹಾರ ಮೊದಲು ಕ್ರಿಯಾತ್ಮಕವಾಗಿ ಮೂರು ಭಾಗವಾಗಿ ವಿಂಗಡಿಸಲ್ಪಡುತ್ತದೆ ಆದರೆ ಅದು ಭೌತಿಕವಾಗಿ ದ್ರವರೂಪದಲ್ಲಿ ಒಂದಾಗಿಯೇ ಇರುತ್ತದೆ.
ಇಲ್ಲಿ ನಾವು ಹೇಳುತ್ತಿರುವುದು ರಾಸಾಯನಿಕಗಳ ವಿಭಜನೆಯಲ್ಲ, ಅದು ಶುದ್ಧ ಜೈವಿಕ ಪರಿವರ್ತನೆಯಾಗಿರುತ್ತದೆ.
ಈ ಸತ್ಯವನ್ನು ಕಂಡುಕೊಳ್ಳದ ಆಧುನಿಕ ವೈದ್ಯ ವಿಜ್ಞಾನ ಆಹಾರವನ್ನು ಕೇವಲ ರಾಸಾಯನಿಕಗಳ ರೂಪದಲ್ಲಿ ನೋಡಿ, ಆಹಾರವೇ ಜೀವಿಯಾಗಿ ಉನ್ನತೀಕರಿಸಿಕೊಳ್ಳುತ್ತದೆ ಎಂಬ ಸತ್ಯವನ್ನು ಮರೆತು ಕೃತಕ ರಾಸಾಯನಿಕಗಳನ್ನು ಸೃಷ್ಟಿಸುತ್ತಾ ರೋಗಗಳನ್ನು ನಿರ್ಮೂಲನೆ ಮಾಡಲು ನೋಡುತ್ತಿದೆ. ಅದು ಸರ್ವದಾ ಅಸಾಧ್ಯ...
ಈ ಜೈವಿಕ ಪರಿವರ್ತನೆಯ ದ್ರವರೂಪದ ಅಂಶವನ್ನೇ ಆಯುರ್ವೇದ ವಿಪಾಕ ಎನ್ನುತ್ತದೆ. ಈ ವಿಪಾಕ ದ್ರವದೊಳಗೆ ಆಹಾರದಿಂದ ವಿಭಜಿತವಾಗಿ ದ್ರವರೂಪದಿಂದ ಸಂಗ್ರಹಿಸಲ್ಪಟ್ಟ ಮೂರು ಕ್ರಿಯಾತ್ಮಕ ಘಟಕಗಳೇ ಫೇನಕಫ, ಶುದ್ಧಪಿತ್ತ ಮತ್ತು ಪೋಷಕ ವಾಯು ಆಗಿವೆ.
ವಿಪಾಕ ಅಥವಾ ವಿಪಾಕದ್ರವ ಎಂದರೆ ವಿಶೇಷವಾದ ಪಾಕ ಎಂದರ್ಥ. ಇದನ್ನು ರಾಸಾಯನಿಕವಾಗಿ ನೋಡುವ ಬದಲು ಜೀವರಸದ ರೂಪದಲ್ಲಿ ದರ್ಶಿಸುತ್ತದೆ ಆಯುರ್ವೇದ...
ಈ ವಿಪಾಕ ಎಂಬುದು ಮಧ್ಯದ ಅವಸ್ಥೆಯ ಜೀವಧಾರಕ ಅಂಶವಾಗಿದೆ. ಅಂದರೆ ಅತ್ತ ಆಹಾರವೂ ಅಲ್ಲ, ಇತ್ತ ಶರೀರವೂ ಅಲ್ಲ, ಆಹಾರ ಶರೀರವಾಗಿ ಮಾರ್ಪಡಲು ತನ್ನನ್ನು ತಾನು ರೂಪಾಂತರಗೊಳಿಸಿಕೊಂಡ ಒಂದು ದ್ರವ ರೂಪದ ಜೀವರಸ ಅವಸ್ಥೆಯೇ ವಿಪಾಕ ಅಥವಾ ವಿಪಾಕದ್ರವ.
•|•|•|•|•|•
ಇಂದು ನಮ್ಮ ಶರೀರಗಳು ರೋಗಗ್ರಸ್ತವಾಗಲು ಏನು ಕಾರಣ?
ವಿಪಾಕ ಮೂರು ರೂಪದಲ್ಲಿರುತ್ತದೆ --
• ಮಧುರ ವಿಪಾಕ
• ಆಮ್ಲವಿಪಾಕ
• ಕಟುವಿಪಾಕ
ಮಧುರ ವಿಪಾಕವು ಶರೀರದ ಜೀವಕೋಶಗಳನ್ನು ವರ್ಧಿಸುತ್ತಾ, ಸವಕಳಿಯನ್ನು ತುಂಬುತ್ತಾ ದೃಢವಾಗಿ ಇಡುತ್ತದೆ.
ಆಮ್ಲವಿಪಾಕವು ಶರೀರದ ಅಗ್ನಿಯನ್ನೂ, ರಕ್ತವನ್ನೂ ಪೋಷಿಸುತ್ತದೆ.
ಕಟುವಿಪಾಕವು ಶರೀರಕ್ಕೆ ಚಲನೆಯನ್ನು ಕೊಡುತ್ತದೆ.
ಈಗ ಆಗುತ್ತಿರುವ ತೊಂದರೆ ಎಲ್ಲಿದೆ ಎಂದರೆ --
ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗಬೇಕಿದ್ದ ಮಧುರವಿಪಾಕವು ಕಡಿಮೆ ಪ್ರಮಾಣದಲ್ಲಿ ಅಥವಾ ದುರ್ಬಲ ರೂಪದಿಂದ ಉಂಟಾಗುತ್ತಿದೆ. ಹಾಗಾಗಿ ನಮ್ಮ ಮಕ್ಕಳ ಜೀವಕೋಶಗಳು ಸರಿಯಾಗಿ ವರ್ಧಿಸದೇ ನಮ್ಮ ಜೀವಕೋಶಗಳ ಸವಕಳಿ ಸರಿಯಾಗಿ ತುಂಬದೇ, ದೃಢತೆ ಕುಗ್ಗಿ ಅಂದರೆ ಜೀವಕೋಶಗಳ ಪ್ರತಿರೋಧಕ ಶಕ್ತಿ ಕುಗ್ಗಿ, ಹೆಚ್ಚು ಹೆಚ್ಚು ರೋಗಕ್ಕೆ ತುತ್ತಾಗುತ್ತಿದ್ದೇವೆ.
ಅಲ್ಪ ಪ್ರಮಾಣದಲ್ಲಿ ಉತ್ಪತ್ತಿಯಾಗಬೇಕಿದ್ದ ಆಮ್ಲವಿಪಾಕವು ಯಥೇಚ್ಛವಾಗಿ ರೂಪಾಂತರವಾಗುತ್ತಿದೆ, ಹಾಗಾಗಿ ಎಲ್ಲರ ಶರೀರವೂ "ಹೀಟ್" ಎನ್ನುತ್ತೇವೆ ಮತ್ತು ಇಂದು ಔಷಧ ವ್ಯವಹಾರಿಕ ಜಗತ್ತನ್ನು ಆಳುತ್ತಿರುವ ಗ್ಯಾಸ್‌ಟ್ರೈಟೀಸ್, ಕೊಲೈಟೀಸ್, ಆತಂಕ, ಭಯ, ಮಧುಮೇಹ, ಬಿ.ಪಿ. ಹೃದ್ರೋಗ, ಹೈಪೋಥೈರಾಯ್ಡಿಸಮ್, ಸ್ಪಾಂಡಿಲೈಟೀಸ್, ರುಮಟಾಯ್ಡ್ / ಗೌಟ್(uric acid), ಅಟೋಇಮ್ಯೂನ್ ರೋಗಗಳು ಮುಂತಾದ ಜೀವನಪರ್ಯಂತ ಹಣ ಸುರಿದೂ ಸರಿಯಾಗದ ರೋಗಗಳಿಗೆ ಕಾರಣವೇ ನಮ್ಮ ಹುಳಿಮೈ ಅಥವಾ ಆಮ್ಲವಿಪಾಕ ಆಗಿದೆ.
ಇನ್ನು, ಅತ್ಯಲ್ಪ ಪ್ರಮಾಣದಲ್ಲಿ ಮತ್ತು ನಿಯಂತ್ರಿತ ರೂಪದಲ್ಲಿ ಉಂಟಾಗಬೇಕಿದ್ದ ಕಟುವಿಪಾಕ ಹೆಚ್ಚು ಮತ್ತು ಅನಿಯಂತ್ರಿತಗೊಂಡಿದೆ, ಹಾಗಾಗಿ ನಮ್ಮ ಭಾವನೆಗಳ, ಚಲನವಲನಗಳ ನಿಯಂತ್ರಣ ಕಳೆದುಕೊಳ್ಳುತ್ತಿದ್ದೇವೆ ಮತ್ತು ಅದರಿಂದ ಹೃದಯಾಘಾತ, ಪಕ್ಷಾಘಾತ, ಅಪಘಾತಗಳಿಂದ ನರಳುತ್ತಿದ್ದೇವೆ ಮತ್ತು ಆತ್ಮಹತ್ಯೆಗಳಂತಹ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದೇವೆ... 🤔🤔
•|•|•|•|•|•
ತೀರ್ಮಾನಕ್ಕೆ ಒಂದು ಮಾತು --
ನಾವು ನಮ್ಮ ಶರೀರ ಉತ್ಪತ್ತಿ ಮಾಡುವ ಜೀವರಸವಾದ ವಿಪಾಕದ್ರವವನ್ನು ಹುಳಿ ಅಥವಾ ಆ್ಯಸಿಡ್ ರೂಪದಲ್ಲಿ ಇಟ್ಟುಕೊಂಡಿದ್ದೇವೆ. ಇದರ ಪರಿಣಾಮವೇ ಹೀಟ್! ಈ ಆ್ಯಸಿಡ್‌ನಲ್ಲಿ ನಮ್ಮ ಜೀವಕೋಶಗಳು ಮೆತ್ತಗಾಗುತ್ತಿವೆ, ಅಸ್ಥಿಗಳು ಕರಗುತ್ತಿವೆ, ಬೇಗ ಮುಪ್ಪು ಆವರಿಸುತ್ತಿದೆ. ಇದನ್ನೇ ಆಕ್ಸಿಡೇಷನ್ ಪ್ರೊಸೆಸ್ ಎನ್ನುವ ಆಧುನಿಕ ವಿಜ್ಞಾನ ಆ್ಯಂಟಿ ಆಕ್ಸಿಡಂಟ್ ಔಷಧಗಳನ್ನು ಸೂಚಿಸಿ ವ್ಯಾಪಾರ ಮಾಡುತ್ತಿದೆಯೇ ಹೊರತು ಆ್ಯಸಿಡ್ ತಡೆಯುವ ತಂತ್ರವನ್ನು ಹೇಳಿಕೊಡುತ್ತಿಲ್ಲ... 🙄🙄
•|•|•|•|•|•
ರೋಗಗಳನ್ನು ತಡೆಯುವ ತಂತ್ರಗಳೇನು?
ಸುಲಭವಾಗಿ ಜೀರ್ಣವಾಗದ ಕಾರಣ ಆಮ್ಲವಿಪಾಕ(ಹುಳಿರಸ) ಉಂಟುಮಾಡುವ ಗೋಧಿ, ಉದ್ದು, ಮೈದಾ, ಮೊಳಕೆಕಾಳು, ನೆನೆಸಿದ ಹಸಿಕಾಳು, ಸಕ್ಕರೆಗಳನ್ನು ತ್ಯಜಿಸುವುದು...
ಹೊಟ್ಟೆ ಬಿರಿಯುವಂತೆ ತಿನ್ನುವ ಕಾರಣ ಜೀರ್ಣವಾಗದೇ ಶುದ್ಧ ಆಹಾರವೂ ಆಮ್ಲವಿಪಾಕ (ಹುಳಿ ಬಿಡುವ) ಆಗುವ ಕಾರಣ, ಮಿತ ಆಹಾರ ಅಥವಾ ಶಾರೀರಿಕ ಶ್ರಮದ ಅಗತ್ಯದಷ್ಟು ಪ್ರಮಾಣದ ಆಹಾರ ಸೇವನೆ ಮಾಡುವುದು...
ಆರ್.ಒ. ಜಲ ಸೇವಿಸಿ ಅದರ ಆಮ್ಲತೆಯ ಕಾರಣ ಸೇವಿಸಿದ ಶುದ್ಧ ಅಹಾರ ಆಮ್ಲವಿಪಾಕವಾಗುವ ಕಾರಣ ಅದನ್ನು ಸರ್ವದಾ ತ್ಯಜಿಸುವುದು...
ಫ್ರಿಜ್‌ನಲ್ಲಿ ಇಟ್ಟ ಕಾರಣ ಆಹಾರ ಸತ್ವವನ್ನು ಇಟ್ಟುಕೊಂಡಿರುವುದಿಲ್ಲ, ತಿನ್ನುವಾಗ ತಿಳಿಯುವುದಿಲ್ಲ ಅಷ್ಟೇ ಒಳಹೋಗಿ ಆಮ್ಲವಿಪಾಕ (ಹುಳಿರಸ) ಬಿಡುವ ಕಾರಣ ಫ್ರಿಜ್ ಆಹಾರ ತ್ಯಜಿಸುವುದು...
Wednesday, 15 September 2021
Subscribe to:
Posts (Atom)
MATHS TIME LINE
MATHS TIME LINE https://mathigon.org/timeline
-
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಭವಿಷ್ಯದ ಬದುಕಿಗೆ ದಿಕ್ಸೂಚಿಯಾಗುವ ಎಸ...
-
CLICK HERE TO DOWNLOAD
-
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ಪ್ರಶ್ನೆ ಪತ್ರಿಕೆ-1 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ...