✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Thursday, 12 August 2021

ಆಸ್ಪತ್ರೆ ರಹಿತ ಜೀವನಕ್ಕೆ ಮನೋ ವಿಶ್ಲೇಷಣೆಯ ಮಹತ್ವ

ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ -- ಸಂಚಿಕೆ: 72
      ದಿನಾಂಕ: 12/08/2021
•••••••••••••••••••••••••••••••••••••••
ಅಮೃತಾತ್ಮರೇ, ನಮಸ್ಕಾರ 
       🙏🙏🙏🙏🙏
ಇಂದಿನ ವಿಷಯ:
  ಆಸ್ಪತ್ರೆ ರಹಿತ ಜೀವನಕ್ಕೆ ಮನೋ ವಿಶ್ಲೇಷಣೆಯ ಮಹತ್ವ
•••••••••••••••••••••••••••••••••••••••
  ಸಹೃದಯ ಓದುಗರೆ, ವಿಶ್ಲೇಷಿಸಬೇಕಾದುದು, ಹೊರ ಪ್ರಪಂಚವನ್ನಲ್ಲ ನಮ್ಮ ಒಳ ಪ್ರಪಂಚವನ್ನು...

  ಏಕೆಂದರೆ, ರೋಗಗಳು ಹೊರಗಿನಿಂದ ಬರುವವು ಎಂಬ ಸಿದ್ಧಾಂತವನ್ನು ಆಯುರ್ವೇದವು ಮುಕ್ಕಾಲು ಪಾಲು ಒಪ್ಪುವುದಿಲ್ಲ. ಶರೀರ ತಾನಾಗಿಯೇ ದುರ್ಬಲಗೊಳ್ಳದೇ, ಹೊರಗಿನ ಕ್ರಿಮಿಗಳ ಆಕ್ರಮಣ ಏನನ್ನೂ ಮಾಡದು.
ಸೂಕ್ಷ್ಮವಾಗಿ ಗಮನಿಸಿ ನೋಡಿ: ಕೊರೋನಾ ವೈರಾಣು ಜಗತ್ತನ್ನೇ ಅಲುಗಾಡಿಸಿದರೂ ಸಹ ಶೇ.90 ಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಲಿಲ್ಲ ಎಂಬುದು ಇದನ್ನೇ ಸೂಚಿಸುತ್ತದೆ.
                    •|•|•|•|•|•

  ಆಸ್ಪತ್ರೆ ರಹಿತ ಜೀವನ ಎಂದರೆ ಸ್ವಸ್ಥ ಜೀವನ ಅಥವಾ ಆರೋಗ್ಯಕರ ಜೀವನ ಎಂದರ್ಥ.
  ಆಯುರ್ವೇದದ ಪ್ರಕಾರ ಸ್ವಸ್ಥ ಜೀವನ ಎಂದರೆ, ಶರೀರದ ರಚನಾತ್ಮಕ ಮತ್ತು ಕ್ರಿಯಾತ್ಮಕ ಭಾಗಗಳು ಆರೋಗ್ಯದಿಂದ ಇರುವುದಷ್ಟೇ ಅಲ್ಲದೇ ಇಂದ್ರಿಯಗಳು ಮತ್ತು ಮನಸ್ಸು ಸಧೃಢವಾಗಿ ಇರಬೇಕು ಮತ್ತು ಪ್ರಸನ್ನವಾಗಿರಬೇಕು. ಅಂದರೆ, ನಮ್ಮ ದೃಷ್ಟಿಗೆ ಗೋಚರವಾಗುವ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಇವು ಸಧೃಢವಾಗಿ ಮತ್ತು ಸೂಕ್ಷ್ಮಗ್ರಾಹಿಯಾಗಿ ಇರಬೇಕು. ಹಾಗೆಯೇ, ಉಭಯೇಂದ್ರಿಯವಾದ ಮನಸ್ಸು ಸಧೃಢವಾಗಿಯೂ ಸೂಕ್ಷ್ಮಗ್ರಾಹಿಯಾಗಿಯೂ ಮತ್ತು ಪರಹಿತತ್ವದಿಂದ ಕೂಡಿರಬೇಕು.
                    •|•|•|•|•|•

  ಮಾನವನೆಂದರೆ ಮನಸ್ಸು ಎಂದರ್ಥ. ಇಲ್ಲಿ ಪ್ರತಿಯೊಂದು ದೇಹಕ್ಕೂ ಒಂದೊಂದು ಮನಸ್ಸು ಇದೆ ಎಂದು ನಮಗೆ ಅನ್ನಿಸಿದರೂ ವಾಸ್ತವದಲ್ಲಿ ಪ್ರತಿಯೊಂದು ಮನಸ್ಸೂ ತನಗೆ ಬೇಕಾದ ರೀತಿಯ ಶರೀರವನ್ನು ಆಯ್ಕೆ ಮಾಡಿಕೊಂಡಿದೆ. ಅಂದರೆ, ಪ್ರತಿಯೊಂದು ಮನಸ್ಸಿಗೂ ಒಂದೊಂದು ಶರೀರವಿದೆ ಎಂದರ್ಥ.
                    •|•|•|•|•|•

  ನಮ್ಮ ಮನಸ್ಸಿನ ಎಲ್ಲಾ ಇಚ್ಛೆಗಳಿಗೂ ಸಹಾಯಕವಾಗುವ ಅಥವಾ ಅನುಭವಿಸಲು ಬೇಕಾದ ಯಂತ್ರವೇ ಈ ಶರೀರ. ಕೇವಲ ಯಂತ್ರವನ್ನು ಸರಿಯಾಗಿಟ್ಟುಕೊಳ್ಳುವತ್ತ ಗಮನಿಸಿ ಅದರ ಒಡೆಯನಾದ ಮನಸ್ಸನ್ನು ಆರೋಗ್ಯದಿಂದ ಇಟ್ಟುಕೊಳ್ಳದಿದ್ದರೆ ಅದನ್ನು ಪೂರ್ಣ ಆರೋಗ್ಯ ಎಂದು ಹೇಳಲಾಗದು. ಹಾಗಾಗಿ, ಮನಸ್ಸನ್ನು ಸ್ವಸ್ಥವಾಗಿಟ್ಟುಕೊಂಡಲ್ಲಿ ಶರೀರ ತಾನು ಸ್ವಸ್ಥವಾಗಿರುವುದು ಸುಲಭ! 😀

  ಹೇಗೆಂದರೆ, ಯೋಗ್ಯವಲ್ಲದ ಆದರೆ, ಆಕರ್ಷಣೀಯವಾಗಿಯೂ ರುಚಿಕರವಾಗಿಯೂ ತೋರುವ ಆಹಾರಗಳಿಂದ ದೂರವಿರಲು ನಾವು ಮನಸ್ಸು ಮಾಡಬೇಕೇ ಹೊರತು ಶರೀರದಿಂದ ಮಾಡುವ ಪ್ರಯತ್ನವಲ್ಲ ಅದು. ಕೇವಲ ಶರೀರವನ್ನು ಧೃಢವಾಗಿಟ್ಟುಕೊಂಡು ಮನಸ್ಸು ಅಧೃಢವಾಗಿದ್ದರೆ ಅದು ಬೇಕು ಬೇಕಾದ್ದನ್ನು ಶರೀರಕ್ಕೆ ತಿನ್ನಿಸಿ ಶರೀರದ ಆರೋಗ್ಯವನ್ನು ಹಾಳುಗೆಡವುತ್ತದೆ. ಆಹಾರದಂತೆ, ಇತರ ಇಂದ್ರಿಯಗಳ ಸುಖಕ್ಕೂ ಮನಸ್ಸು ವಿಕೃತ ರೂಪದಿಂದ ಎಡೆ ಮಾಡಿಕೊಟ್ಟರೆ ಅನಾರೋಗ್ಯ ಬರುವುದು ನಿಶ್ಚಿತ. ಹಾಗಾಗಿ "ಮನೋವಿಶ್ಲೇಷಣೆ" ಎಂಬುದು ಮಾನಸಿಕ ಆರೋಗ್ಯಕ್ಕೂ, ಮಾನಸಿಕ ಆರೋಗ್ಯವು ಶರೀರದ ಆರೋಗ್ಯಕ್ಕೂ ಕಾರಣವಾಗುತ್ತದೆ.
                    •|•|•|•|•|•

  ಈ ಮನಸ್ಸಿನ ಅಧಿಪತಿಯಾದ ಚಿತ್ತದಲ್ಲಿ ಸ್ವಾಸ್ಥ್ಯತೆ ಉಂಟಾದರೆ ಮನುಷ್ಯ ಸರ್ವಸ್ವವನ್ನೂ ಪಡೆಯುತ್ತಾನೆ. ಈ ಕಾರಣದಿಂದಲೇ ಆಯುರ್ವೇದ ಆಚಾರ್ಯರು ಚಿತ್ತ ಸ್ವಾಸ್ಥ್ಯ ಅಥವಾ ಪ್ರಸನ್ನ ಚಿತ್ತತೆಯ ಬಗ್ಗೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದಾರೆ.
                    •|•|•|•|•|•

  ಈ ಚಿತ್ತಸ್ವಾಸ್ಥ್ಯ ಮತ್ತು ಮನೋಸ್ವಾಸ್ಥ್ಯಗಳು ಆಸ್ಪತ್ರೆಯಲ್ಲಿ ಸಿಗುವ ಮತ್ತು ಹಣ ಕೊಟ್ಟು ಖರೀದಿಸುವ ವಿಷಯಗಳಲ್ಲ. ಆದರೆ, ಚಿತ್ತಸ್ವಾಸ್ಥ್ಯ ಮತ್ತು ಮನಸ್ಸಿನ ಸ್ವಾಸ್ಥ್ಯತೆ ಇಲ್ಲದೇ ಬಲವಾದ ಶರೀರವೂ ಸಹ ದೌರ್ಬಲ್ಯಕ್ಕೆ ಒಳಗಾಗುತ್ತದೆ.

         🙏 ಧನ್ಯವಾದಗಳು 🙏
•••••••••••••••••••••••••••••••••••••

MATHS TIME LINE

MATHS TIME LINE https://mathigon.org/timeline